Thursday 26 June 2014

ನನ್ನ ನೆನಪ
ನಿನಗೆ
ನೆನಪಿಸಲು
ನಿನ್ನ
ನೆನೆಪಿಗೆ
ನೆನಪಿಸಲೇ ನಾ . . ?
ಳೆದು ಹೋದ 
ಮನಸಿನ ನಡುವೆ 
ನಿನ್ನ ಬಿ೦ಬ ಮೂಡಿದೆ, 
ಮಾತು ಮರೆತ 
ಒ೦ಟಿ ಮನಕೆ 
ನಿನ್ನ ನೆನಪೆ ಕಾಡಿದೆ...

Sunday 22 June 2014

ಸದಾ ತೊಳೆದಿಟ್ಟ 
ಮನೆಯಂತಹ ಮನ ಹೊತ್ತ ನನಗೆ 
ನಿನ್ನ ಹೊರತು 
ಇನ್ಯಾರದೆ ಪಾದದ ಕೆಸರು 
ಅಲ್ಲಿ ಚಿತ್ತಾರ ಮೂಡಿಸುವುದು ಬೇಕಿಲ್ಲ...

Tuesday 10 June 2014

ಸೋತ ಕ್ಷಣಗಳಲ್ಲೆಲ್ಲ
ನಿರೀಕ್ಷೆ ಮಾತ್ರ ಭರವಸೆ,
ಸಾಯುವ ಮೊದಲಾದರೂ 
ಅಪೇಕ್ಷಿತ ಸಂತಸ ಮತ್ತೆ ಸಿಕ್ಕೀತೇನೋ 
ಎನ್ನುವ ಕಿರು 
ಆಸೆ...

Wednesday 7 December 2011

ಕವನವೇಕೆ
ಕಾಂತೆ,
ನೀನೆ ಅಲ್ಲವೇ
ನನ್ನ
ಭಾವದ
ಒರತೆ.... ?

Tuesday 6 December 2011

ಮುಂಜಾನೆಯ 
ಇಬ್ಬನಿಯಲಿ ಅರಳಿದ 
ಕಂಗಳಿಗೆ 
ನಗಲು,
ಸಂಜೆಯ ಬೇಸರದ
ಅಂಜಿಕೆ....
  
ಗೆಳತಿ,
ನಿನ್ನ ಕಣ್ಣೀರ ಮೇಲೆ 
ನನಗೆ
ಹೊಟ್ಟೆಕಿಚ್ಚು ಕಣೆ,
ಯಾರಿಗುಂಟು ಆ ಭಾಗ್ಯ
ಕಣ್ಣ೦ಚಿನಿ೦ದ ಜಾರಿ
ನಿನ್ನ
ಮಡಿಲಲಿ ಕೊನೆಯಾಗುವ 
ಸೌಭಾಗ್ಯ . . .